Haridasa Sahitya — Vyasadasa
Raajarendare shreepaadaraajarayya
ರಾಜರೆಂದರೆ ಶ್ರೀಪಾದರಾಜರಯ್ಯ
Composer: Haridasa · Deity: Vishnu · Genre: Dasara Pada
Kannada lyrics
ರಾಜರೆಂದರೆ ಶ್ರೀಪಾದರಾಜರಯ್ಯ | ರಾಜೀವ ಲೋಚನ ರಂಗವಿಠ್ಠಲ ಭಜಕ || ಪ || ಸ್ಮರಣೆ ಮಾತ್ರದಿ ಅನ್ನ ವಸನಗಳನೀಯುತಲಿ | ಹರಿಭಕ್ತಿ ಹರಿಜ್ಞಾನ ಭಕ್ತಿಯನು ಕರುಣಿಸುವರು | ಭರದಿ ದಾರಿದ್ರ್ಯವನು ಪರಿಹಾರ ಮಾಡುತಲಿ | ನಿರುತ ಧರ್ಮದಿ ನಡೆವ ಮನವಿತ್ತು ಸಲಹುವ || ೧ || ವರ ವಾದಿರಾಜ ವ್ಯಾಸ ವಿಜಯೀಂದ್ರರಿಗೆ | ಪರವಿದ್ಯೆ ವೈರಾಗ್ಯ ಭೋಧಿಸುತಲಿ || ಧರಣಿಯೊಳು ಹರಿದಾಸ ಮಾರ್ಗದಲಿ ನಡೆಸಿದ | ಪರಮ ಕಾರುಣ್ಯ ಗುರು ನರಹರಿ ಪ್ರೀಯರು || ೨ || ಚತುಃಷಷ್ಠಿ ಶಾಖಗಳನ್ನು ನಿಷ್ಠೆಯಿಂದಲಿ ತಾವೇ | ಪರಮೇಷ್ಠಿ ಪಿತನಿಗೆ ಅರ್ಪಿಸುತಲಿ | ಕಷ್ಟಕಾರ್ಪಣ್ಯಗಳ ಏನೊಂದು ಭರಿಸದಲೆ | ಸೃಷ್ಠೀಶನಂಘ್ರಿಯನು ನಿತ್ಯ ಭಜಿಸುತ ಮೆರೆವ || ೩ || ಇವರ ಮಹಿ…
Transliteration
Raajarendare shreepaadaraajarayya | raajeeva locana rangaviththala bhajaka || pa || Smarane maatradi anna vasanagalaneeyutali | haribhakti harij~jaana bhaktiyanu karunisuvaru | bharadi daaridryavanu parihaara maadutali | niruta dharmadi nadeva manavittu salahuva || 1 || Vara vaadiraaja vyaasa vijayeendrarige | pa ravidye vairaagya bhodhisutali || dharaniyolu haridaasa maargadali nadesida | parama…