Haridasa Sahitya — Vyasadasa

Purvajanmadali na madida

ಪೂರ್ವಜನ್ಮದಲಿ ನಾ ಮಾಡಿದ

Composer: Purandara Dasaru · Deity: Hari · Genre: Philosophy

Kannada lyrics

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ ಊರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಪ|| ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ ಕಷ್ಟವಾಗಿರುತಿಹುದು ಕೃಷ್ಣ ದಟ್ಟದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ || ಕಾಸಿನಾ ಆಸೆಯನು ಮಾಡಿ ಬಹು ದಿನದಿಂದಾ- ಯಾಸದೊಳಗಿರುತಿಹೆನೊ ಕೃಷ್ಣ ಆಸೆಯನು ಬಿಡಿಸಿ ಮಿಗೆ ದೋಷವನು ಪರಿಹರಿಸೊ ಸಾಸಿರನಾಮ ಶ್ರೀಕೃಷ್ಣ || ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ ಅಟ್ಟಿ ಕೊಲುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವ ತೆರನಂತೆ ಕಂ- ಗೆಟ್ಟು ಶೋಕಿಸುವೆನೊ ಕೃಷ್ಣ || ಈ ಪರಿಯಿಂದ ನಾನಾಪತ್ತು ಪೇಳಿದರ- ನಾಥನ್ನ ಕಾಯದ…

Transliteration

Huttidandimdigu sukavembudanu ariye Kashtavagirutihudu krushna Dattadaridryavanu pariharisadire duru Tattuvudu ninagayya krushna || Kasina Aseyanu madi bahu dinadinda- Yasadolagirutiheno krushna Aseyanu bidisi mige doshavanu parihariso Sasiranama srikrushna || Muttalanjuvaru bandhugalu kandare enna Atti kolutiharayya krushna Tottila sisu baya biduva teranante kan- Gettu sokisuveno krushna || I par…