Haridasa Sahitya — Vyasadasa
Purandara gururaya satppunya kaya
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ
Composer: Vijaya Dasaru · Deity: Purandara Dasaru · Genre: Bhakti
Kannada lyrics
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ ||pa|| ನಿರುತ ನಿನ್ನ ಚರಣ ಸೇವೆ ಕರುಣ ಮಾಳ್ಪದೋ ಜೀಯಾ||a.pa|| ಬಹು ಜನ್ಮಗಳಲ್ಲಿ ನಾನು ಮಹ ಪುಣ್ಯ ಮಾಡಿದವರ ಸಹವಾಸದಲಿದ್ದು ಗ್ರಹದ ಮುಂದೆ ದೇಹಿಗ ನಾನಾದದರಿಂದ ದ್ರುಹಿಣ ಸುತನೆ ನಿನ್ನನು ಗ್ರಹದಿಂದೆನಗೆ ಮಹಿಸುರ ಜನ್ನವಿತ್ತೆ ||1|| ಮಾನವನೋ ಖಗನೋ ಮೃಗನೋ ಶ್ವಾನ ಸೂಕರನೊ ನಾನದನು ಕಾಣೆನೊ ಮತ್ತಾವನೊ ನಾನಾ ಜೀವನೊ ಆನು ಒಂದು ತಿಳಿಯೆ ಗುರುವೆ ನೀನೆ ಬಲ್ಲಿ ಎನಗೆ ಬಂದ ಅನಾದಿ ಶರೀರವ ಅe್ಞÁನವನ್ನೇ ತೆಜಿಸುವುದು||2|| ಯಾಚನೆ ದೇಹದಲ್ಲಿ ಊಚು ಭಾಗ್ಯವ ಜಯಸದಿಪ್ಪ ಯೋಚನೆಯಿಂದಲಿ ಕಮಲಲೋಚನ ನಿನ್ನಂಘ್ರಿಯಾ ಯಾಚನೆಯಿಂದಲಿ ಕರವ ಬಾಚೆನೊ ಹೀನರಿಗೆ ನಿನ್ನ ಪಾಚಕರ ಮನೆಯ ಪರಿಚಾರ ಸಿದ್ಧ…
Transliteration
Purandara gururaya satppunya kaya ||pa|| Niruta ninna carana seve karuna malpado jiya||a.pa|| Bahu janmagalalli nanu maha punya madidavara Sahavasadaliddu grahada munde Dehiga nanadadarinda druhina sutane ninnanu Grahadindenage mahisura jannavitte ||1|| Manavano kagano mrugano svana sukarano Nanadanu kaneno mattavano nana jivano Anu omdu tiliye guruve nine balli enage banda Anadi sarirava agnanava…