Haridasa Sahitya — Vyasadasa
Krishna Balalila Sulaadi 7 — Mani mouli molle sulaadhi
ಸುಳಾದಿ ೭ — ಮಣಿ ಮೌಳಿ ಮೊಲ್ಲೆ ಮಲ್ಲಿಗಿಯ ದಂಡೆ
Composer: Purandara Dasaru · Deity: Krishna / Vitthala · Genre: Sulaadi
Kannada lyrics
ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಅಠಾಣ ಧೃವತಾಳ ಮಣಿ ಮೌಳಿ ಮೊಲ್ಲೆ ಮಲ್ಲಿಗಿಯ ದಂಡೆ ಗುಂಜೆ ದೊಂಗಲ್ಲು ಉತ್ತಮಾಂಗಾ ಮಕರ ಕುಂಡಲ ಜಲಜಪತ್ರ ಪಿಂಛದೊಂಗಲ್ಲು ಮೆರೆವ ಕರ್ಣ ಕೌಸ್ತುಭ ಕಮಲ ಮಾಲೆ ಕಂಬು ಕಂಠ ಶ್ರೀವತ್ಸ ಸಿರಿಗಂಧ ಸಿರಿತುಲಸಿ ಸಿರಿವಕ್ಷಸ್ಥಳ ಮರಕ ಮಣಿಯ ಕಂಕಣಕಡೆ ತೊಡರು ಸಮಚರಣ ಹೇಮ ವಸನ ಶ್ಯಾಮ ಕೋಮಲಾಂಗ ಅಹೋ ಗೋಪಿಯರ ಮೋಹಿಸುತಿದೆ ಕೃಷ್ಣ ಅಹೋ ಜಗಜ್ಜನರ ಪಾಲಿಸುತಿದೆ ಅಹೋ ಪುರಂದರವಿಠಲನ ಬಾಲಲೇಲೆ ಅಹೋ ಗೋಪಿಯರ ಮೋಹಿಸುತಿದೆ ||೧|| ಮಟ್ಟತಾಳ ಪೊಂಬಟ್ಟಿಯ ಮೇಲೆ ಕಾಚೀದಾಮವು ಬಳಿಯ ಸುತ್ತಿ ಜಂಬು ನೀಲ ಚೂತ ಎಳೆದಳಗಳು ಮುಕುಟದ ಬಾಳೇಗಷ್ಟೇ ಮೇಲೆ ಸುತ್ತಿಕೊಂಡು ಕಂಬು ಕೊಳಲು ತುತ್ತುರಿ ಮೌರಿಗಳು ಭೂಂ ಭೂಂ ಭೂಂ ಭ…