Haridasa Sahitya — Vyasadasa
Krishna Balalila Sulaadi 6 — Kelavaru kendavari sulaadhi
ಸುಳಾದಿ ೬ — ಕೆಲವರು ಕೆಂದಾವರಿಯ ಹಾಸಿ ಪವಡಿಸೆನೆ
Composer: Purandara Dasaru · Deity: Krishna / Vitthala · Genre: Sulaadi
Kannada lyrics
ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಕಾಂಬೋಧಿ ಧೃವತಾಳ ಕೆಲವರು ಕೆಂದಾವರಿಯ ಹಾಸಿ ಪವಡಿಸೆನೆ ಪವಡಿಸುವಿ ಕೆಲವರು ಉಪಬರ್ಹಾಣ ಈಯಲು ನೀನಂಬುವೀ ಕೆಲವರು ಕೇತಕಿಚಾಮರ ಬೀಸಲು ನೀನಲವೀ ಕೆಲವರು ಪಾದಮಗಳ ವತ್ತಲು ನೀವೊಲಿವೀ ಕೆಲವರು ತೋಳ್ಕೊಡೆ ಮೈ ಮಗವೆರಸಿ ಅಪ್ಪಾಲು ಮರಳಪ್ಪುವೆ ಕೆಲವರು ಕೊಂಬು ಕೊಳಲು ತಿತ್ತಿರಿ ಮೌರಿಗಳ ಬಾರಿಸೆ ನೀವಲಿವೀ ಕೆಲರು ಮಂದರ ಮಧ್ಯಮ ತಾರಕ ಅನೇಕ ರಾಗಗಳು ಪಾಡೆ ಝಣ ಝಣ ಝಣರೆಂದುಗ್ಗುಡಿಸೆ ಕೆಲವರು ಧಿಂ ಧಿಂ ಧಿಂ ಧಿಂಮಿಕೆನುತಲಿ ಕೆಲರು ನೃತ್ಯವಾಡೆ ಸುಖಿಸುವೆ ಜಲಜಾಕ್ಷ ಏನಿನ್ನಿವರಾಪುಣ್ಯವನೆಂತು ಬಣ್ಣಿಪೇ ಹಲಧರನು ನಿನ್ನೊಡನೆ ನಿನ್ನೊಳಾಡುವ ಗೋಪ ಗೋಪಿ ಗೋಕುಲಕ್ಕೆ ನಮೊ ಪುರಂದರ ವಿಠಲ ಹಲಧರನು ನಿನ್…