Haridasa Sahitya — Vyasadasa
Krishna Balalila Sulaadi 5 — Kalingaphanimardhana sulaadhi
ಸುಳಾದಿ ೫ — ಕಾಳಿಂಗಫಣಿಮರ್ಧನ ಸುಳಾದಿ
Composer: Purandara Dasaru · Deity: Krishna / Vitthala · Genre: Sulaadi
Kannada lyrics
ಕಾಳಿಂಗಫಣಿಮರ್ಧನ ಸುಳಾದಿ ರಾಗ ಆರಭಿ ಧೃವತಾಳ ಗಲಭೆ ಇದೇನೋ ಬೊಮ್ಮಾದಿಗಳ ಉಲುಹು ಇದೇನೋ ರುದ್ರಾದಿಗಳ ಸುಳಿದರೆ ಸುಹೊಯ್ಯೋ ಸುರಾದಿಗಳ ನಿಲಹೆ ಹೇಳಲೊ ಸನಕಾದಿಗಳ ನಳಿನ ಪತ್ರಾಕ್ಷ ನೋಲಗ ಶಾಲೆಗೆ ಸಲುವೊರೆ ಲಿಂಗ ಶರೀರಗಿಳು ಕಲಕಾಲದಲಿ ಲಕುಮಿಯ ಅರಸಿ ಸುಲಭನೊಪ್ಪಿಯ ಪುರಂದರವಿಠಲ ಗಲಭೆ ಇದೇನೋ ಬೊಮ್ಮಾದಿಗಳ ||೧|| ಮಟ್ಟತಾಳ ಮುಕುತ ವಿರಿಂಚಿ ವಿಹಂಗಪತಿಗಳ ಕೈಯ್ಯಾ ಉಕುತಿಗಳಿಂದನು ತುತಿಸಿ ಕೊಂಬುವದೆತ್ತ ಆಕಳ ಕಾಯಿವಗೋಪ ಗೊಲ್ಲತೇರ ಮಕ್ಕಳ ಕೈಯಿಂದ ಎತ್ತಿಸಿಕೊಂಬೋದೆತ್ತ ಸಕಲ ಸುರರು ನಗರೆ ರಂಗಯ್ಯಾ ನಿನಗಾ ತಕ್ಕದ ಮಾಡಿದಿಯೋ ಪುರಂದರವಿಠಲ ಆಕಳ ಕಾಯ್ದೆ ಗೋಪ ಗೊಲ್ಲತೇರ ||೨|| ತ್ರಿವಿಡಿತಾಳ ಬದಿಯಾ ಬಲಿದು ಕಡಹದ ಮರನೇರೆ ಕಾಲಿ…