Haridasa Sahitya — Vyasadasa

Krishna Balalila Sulaadi 4 — Hode marala kalita Krishna sulaadhi

ಸುಳಾದಿ ೪ — ಹೊಡೆ ಮರಳ ಕಲಿತ ಕೃಷ್ಣ

Composer: Purandara Dasaru · Deity: Krishna / Vitthala · Genre: Sulaadi

Kannada lyrics

ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಸೌರಾಷ್ಟ್ರ ಧೃವತಾಳ ಹೊಡೆ ಮರಳ ಕಲಿತಾ ಶ್ರೀಕೃಷ್ಣ ನಾಗರ ಹೆಡೆಯಂತೆ ತಲೆ ಎತ್ತಲಿ ಕಲಿತಾ ಕೃಷ್ಣ ಕಡು ಮುದ್ದು ಸುರಿವಂಥ ನಗಲು ಕಲಿತ ಕೃಷ್ಣ ನುಡಿಯಾ ಕಲಿತ ಉಗ್ಗು ಉಗ್ಗು ಎಂದು ಕೃಷ್ಣ ಉಡಿ ಘಂಟಿ ಹುಲಿಯುಗರರಳಲೆ ಮಾಗಾಯಿ ಕೊರಳ ಪದಕ ಮುದ್ರೆ ಮೆರೆವ ಕೃಷ್ಣಾ ಕಡಗ ಕಂಕಣದಿಂದ ಮೆರೆವಾ ಕೃಷ್ಣಾ ಮಡದಿಯರೆತ್ತಿ ಮುದ್ದಾಡಿ ಸಲವರ ವಾ- ರುಡಿಯ ಮೇಲಿದ್ದು ಕುಣಿವನು ಕೃಷ್ಣಾ ಹಿಡಿಹೊನ್ನು ತಾ ಹೊನ್ನು ಗುಬ್ಬಿಯಂದದಿ ಹೆ- ಜ್ಜಿಡಿದು ಚಪ್ಪಳೆನಿಕ್ಕುವನು ಕೃಷ್ಣ ಮೃಡ ಮುಖ್ಯ ಸುರರು ಅಂಬರದಲ್ಲಿ ನೋಡಿ ನೋಡಿ ಕಡುವೊಪ್ಪಿತುತಿಸಿ ಹಾರೈಸುತಿರೆ ಕಡೆಗಣ್ಣಿನಿಂದವರನ್ನ ನೋಡಿ ನಲುವ ನಮ್ಮ ಒಡನಾಡುವ ಪುರಂದ…