Haridasa Sahitya — Vyasadasa
Krishna Balalila Sulaadi 3 — Kaduga kankana sulaadhi
ಸುಳಾದಿ ೩ — ಕಡಗ ಕಂಕಣ ಕಟ್ಟಿಯ ತೊಡರು
Composer: Purandara Dasaru · Deity: Krishna / Vitthala · Genre: Sulaadi
Kannada lyrics
ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಮಧ್ಯಮಾವತಿ ಧ್ರುವತಾಳ ಕಡುಗ ಕಂಕಣ ಕಟ್ಟಿಯ ತೊಡರು ಸಮಚರಣ ಹೇಮವರ್ಣ ಶ್ಯಾಮಕೋಮಲಾಂಗ ಅಹೋ ಗೋಪಿಯರ ಮೋಹಿಸುತ್ತಿದೆ ಪುರಂದರವಿಠಲನ ಬಾಲಲೀಲೆ ||೧|| ಮಟ್ಟತಾಳ ಪೊಂಬಟ್ಟಿಯ ಮೇಲೆ ಕಾಂಚಿಯದಾಮ ಮೇಲೆ ಗುಡಿ ಕಟ್ಟಿ ಜಂಬೂ ಚೂತದೆಳೆ ತಳಿರುಗಳ ಮುಕುಟದ ಮೇಲ್ಕಟ್ಟಿ ಕೊಂಬು ಕೊಳಲು ತುತ್ತೂರಿ ಮೌರಿವುಗಳು ಭೂಂ ಭೂಂ ಭೂಂ ಭೂಂ ಝಂ ಝಂ ಝಂ ಝಂ ಎಂಬ ರಾಮಕೃಷ್ಣ ಗೋಪರುಗಳ ಸಂಭ್ರಮಿಸುವರ ಸೋಲಿಸಿತು ಜಂಭಭೇದಿಸ್ವಯಂಭುವ ಮುಖ್ಯಸುರವಂದಿತ ಕಂಬುಗ್ರೀವ ತಿರುವೆಂಗಳಪ್ಪ ಪುರಂದರವಿಠಲರೇಯಾ ।।೨।। ತ್ರಿವಿಡಿತಾಳ ಜಯ ಜಯ ಸಿರಿನಾರಸಿಂಹ ದುರಿತ ಭಯ ನಿವಾರಣ ಜಯ ಜಯ ಸಿರಿ ದಿವ್ಯ ಸಿಂಹ ಪುರಂದರವಿಠಲರೇಯಾ ಜಯ ಜಯ ॥…