Haridasa Sahitya — Vyasadasa

Krishna Balalila Sulaadi 2 — Kinnara kimpurusharu sulaadhi

ಸುಳಾದಿ ೨ — ಕಿನ್ನರ ಕಿಂಪುರುಷರು ನಭದಲಿ

Composer: Purandara Dasaru · Deity: Krishna / Vitthala · Genre: Sulaadi

Kannada lyrics

ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಕೇದಾರಗೌಳ ಧ್ರುವತಾಳ ಕಿನ್ನರ ಕಿಂಪುರುಷರು ನಭದಲಿ ಸುರ- ಕನೈಯರೊಡನಾಡಿ ಪಾಡುತಿರೆ ನಿನ್ನಾಳಾಗಿ ಗೋಪರು ಕೊಂಬು ಕೊಳಲೂದಿ ಕಿನ್ನರಿ ಮೌರಿ ತುತ್ತುರಿ ಧ್ವನಿಗೈಯ್ಯ ರನ್ನದ ರತುನದಂದುಗೆ ಗೆಜ್ಜೆ ಘಲಿ ಘಲಿ ನಿನ್ನ ಮೂರುತಿ ನಿನ್ನ ಬಾಲಲೀಲೆ ಚನ್ನ ಮೂರುತಿ ಚನ್ನ ಕೀರುತಿ ಜಯ ಜಯ ಎನ್ನಾಳಿದ ಪುರಂದರವಿಠಲ ಜೀಯಾ ।।೧।। ಮಟ್ಟತಾಳ ಕೌಸ್ತುಭ ಕೊರಳಲಿ ಕಲ್ಲಿಯ ಕಂಬಳಿಯನಿಡುವೆ ಕಂಜನಾಭಿಯಲ್ಲಿ ಕಲ್ಲಿಯ ಕಟ್ಟಿ ಮರೆವೆ ಕಂಜನಾಭಿಯಲ್ಲಿ ಕಮಲೆಯ ನೂಪುರಗತಿ ಕ್ರಮಗತಿಗಳನೊಪ್ಪುವೆ ಕಂಜನಾಭಿಯಲ್ಲಿ ಬಾಲಲೀಲೆಯ ನಿನಗೇನು ಪಿರಿಯವೋ ಪುರಂದರವಿಠಲ ||೨|| ಆದಿತಾಳ ನೀಲಮುತ್ತಿನ ದಂಡೆ ನೀಲಿ ಗುಂಜಿಯ ದಂಡೆ ಮೇಲ…