Haridasa Sahitya — Vyasadasa
Krishna Balalila Sulaadi 1 — Ele ele shidilu minche sulaadhi
ಸುಳಾದಿ ೧ — ಎಲೆ ಎಲೆ ಶಿಡಿಲು ಮಿಂಚೆ ಘರ್ಜಿಸದಿರಿ ನೀವು
Composer: Purandara Dasaru · Deity: Krishna / Vitthala · Genre: Sulaadi
Kannada lyrics
ಶ್ರೀಕೃಷ್ಣ ಬಾಲಲೀಲಾ ಸುಳಾದಿ ರಾಗ ಬೃಂದಾವನಸಾರಂಗ ಧ್ರುವತಾಳ ಎಲೆ ಎಲೆ ಶಿಡಿಲು ಮಿಂಚೆ ಗರ್ಜಿಸದಿರಿ ನೀವು ಎಲೆ ಎಲೆ ಮೇಘರಾಜ ಮಳಿಗರಿಯದಿರು ಎಲೆ ಎಲೆ ಭೂದೇವಿ ನವರತುನಗಳಿಂದ ನೆಲೆ ಕಟ್ಟಿ ಕಟ್ಟಿಕೊಂಡು ಥಳಿ ಥಳಿಸುತಲಿರು ಹುಲಿ ಉಗುರು ಅರಳೆಲೆ ಮಾಗಾಯಿ ಕಂಕಣ ಘಲು ಘಲು ಘಲುಕೆಂಬೊ ಕಾಲ ಪೆಂಡಿಯನಿಟ್ಟು ಬಲರಾಮ ಪುರಂದರವಿಠಲ ಗೋಪಾಲಕೃಷ್ಣ ನೆಲವು ತುಂಬೆಗಾಲನಿಕ್ಕುತ ಬರುತಾರೆ ಎಲೆ ಎಲೆ ಮೇಘರಾಜ ಮಳೆಗರಿಯದಿರು ||೧|| ಮಟ್ಟತಾಳ ಬೆಣ್ಣೆ ಬಚ್ಚಲ ತೊಡಿಯಾ ಮೇಲಿಟ್ಟು ಕೊಂಡು ಅಣ್ಣ ಬಲರಾಮನ ಕೂಡಿಕೊಂಡು ಚನ್ನಾಗಿ ಡೊಗ್ಗಾಲೂರಿ ಮೆಲುವ ಕೃಷ್ಣ ಲಿನ್ನಿಕ್ಕುತ ಬರುತಾನೆ ಅಣ್ಣನ ಒಡಗೂಡಿ ಹಸುಮಗನಂದದಲಿ ನಿನ್ನ ಮಗನೆ ಇವನು ಕೇಳೆಲೆ ಗೋ…