Haridasa Sahitya — Vyasadasa

Purandara dasarayara

ಪುರಂದರ ದಾಸರಾಯರ

Composer: Vijaya Dasaru · Deity: Purandara Dasaru · Genre: Bhakti

Kannada lyrics

ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ||pa|| ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ||1|| ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ||2|| ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ…

Transliteration

Purandaragadada olage hiriya savukaranenasi Paripariya saukyagala surisutta Irutiralu narahari tvaritadim brahmananagutta Pogutta yajamana kandu Jaridu brahmananhorage hakalu Marudivasa mat~hogi ninta||1|| Baribarige savukarana Moreg~hotti mereyillade Aru tingalu bennu bilutta nayakaru Itana Aru atyarendu baiyutta besattu eradu Heru rokka munde suriyutta adarolagondu Ddarisiko endu helalu narayana…