Haridasa Sahitya — Vyasadasa

Puje yatako

ಪೂಜೆ ಯಾತಕೋ,

Composer: Purandara Dasaru · Deity: Vishnu · Genre: Dasara Pada

Kannada lyrics

ಪೂಜೆ ಯಾತಕೋ, ಮನುಜ ಪೂಜೆ ಯಾತಕೋ ||ಪ ||| ಪೂಜೆಯಲಿ ನಿನ್ನ ಮನ ನಿಲ್ಲದಿದ್ದ ಮೇಲೆ ನಿನಗೆ ||ಅ || ಭೂತದಯಾ ಪಶ್ಚಾತ್ತಾಪ ನೀತಿಯೆಂಬುದು ಮತ್ತಿಲ್ಲ ಮಾತಿನಲಿ ಜ್ಞಾನಿಯಲ್ಲ ಕೋತಿ ಬುದ್ಧಿ ಬಿಡಲಿಲ್ಲ || ಹಾಕುವುದು ಸಾಧುವೇಷ ಸಾಕುವುದು ಹಲವು ದೋಷ ಬೇಕೇ ನಿನಗೆ ಒಳ್ಳೆ ಪದ ಏಕೆ ಭ್ರಾಂತಿ ಉನ್ಮತ್ತ || ಪೂಜೆಯಲ್ಲಿ ಹೊಲೆಯನಿಸಿ ಜಾಜಿ ತುಳಸಿ ಕೈಯಲಿ ಮೂರ್ಜಗದೊಡೆಯ ಅವನು ಎಲ್ಲಿ ಮಾರ್ಜಾಲನಂತೆ ನೋಡದಲಿ || ಆಸೆಯನು ಬಿಡಲಿಲ್ಲ ಶೇಷಶಯನನ ಪೂಜೆಯೆಲ್ಲ ಗಾಸಿಬಟ್ಟು ಮಾಡುತಿಯಲ್ಲ ಮೋಸ ಹೋಗದೆ ತಿಳಿಯೊ ಎಲ್ಲ || ತಂದೆ ಪುರಂದರವಿಠಲನ ಒಂದೆ ಮನದಿ ನೆನೆ ಅಣ್ಣಯ್ಯ ಎಂದು ಕುಂದದ ಪದವನೀವ ನಂದ ನಂದನ ತಂದೆ ಕೃಷ್ಣ ||

Transliteration

Puje yatako manuja puje yatako||p|| Pujeyali ninna mana nilladidda mele ninage||a|| Bhutadaya pashcattapa nitiyembudu mattilla Matinali jnaniyalla koti buddhi bidalilla||1|| Hakuvudu sadhu vesa sakuvudu halavu dosa Beke ninage olle pada eke bhranti unmatta||2|| Pujeyalli holeyanisi jaji tulasi kaiyali Mujagadodeya avanu elli marjalanante nodadali||3|| Aseyanu bidalilla shesashayana pujeyalla Gasip…