Haridasa Sahitya — Vyasadasa
Upadeshada sulaadhi
ಉಪದೇಶದ ಸುಳಾದಿ
Composer: Prasanna Venkata Dasaru · Deity: Hari · Genre: Sulaadi
Kannada lyrics
ಉಪದೇಶದ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವ ಸಿರಿ ಸಂಪದದೆ ಸೌಖ್ಯದ ಲಂಪಟವ ಹರಿ ತ ಕಾಂತಿಗಳಿಗೆ ಕೊಡ ಅಖಿಳದ ಅರಸುತನದ ಸೌಭಾಗ್ಯದ ಬಯಕೆಯ ಕರುಣಾಂಬುಧಿ ತನ್ನ ಶರಣ ಜನರ ಭವ ಭಾರಕನೆಂಬೊ ಬಲು ಬಿರುದು ರಕ್ಷಕನಾಗಿ ಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವು ಬರುವುವೆಂದರಿದು ಶ್ರೀಪ್ರಸನ್ನವೆಂಕಟ ಕೃಷ್ಣ |॥ 1 |॥ ಮಠತಾಳ ಮರೆಯ ಹರಿಗಭಿಮುಖರ ಭಾಗ್ಯವೆ ಭಾಗ್ಯ ಹರಿಗೆ ವಿಮುಖರ ಭಾಗ್ಯ ದೌರ್ಭಾಗ್ಯ ಹರಿಪ್ರಿಯಜನರ ವೃತ್ತಿ ನಿವೃತ್ತಿ ಹರಿಪರವಲದ ಯಜ್ಞ ಅವಜ್ಞ ಹರಿಮುಖ್ಯನೆಂಬೊ ನಿಗಮ ಸುಗಮ ಹರಿಯಾದರಿಸದ ಆಗಮ ದುರಾಗಮ ಸಿರಿ ಪ್ರಸನ್ನೆಂಕಟಕೃಷ್ಣ ಜೀವರಿಗೆ ಸರಿಯೆಂದವನು ಇಹಪರಕೆ ಬಾಹಿರನು। ತ್ರಿಪು…