Haridasa Sahitya — Vyasadasa
Srihariya melina sulaadhi
ಶ್ರೀಹರಿಯ ಮೇಲಿನ ಸುಳಾದಿ
Composer: Prasanna Venkata Dasaru · Deity: Hari · Genre: Sulaadi
Kannada lyrics
ಶ್ರೀಹರಿಯ ಮೇಲಿನ ಸುಳಾದಿ ರಾಗ ಭೌಳಿ ಧ್ರುವತಾಳ ಹರಿ ನಿನ್ನ ಕಥಾಮೃತ ವರ್ಷವು ಚಿರಕಾಲದ ಪುಣ್ಯಾಂಕುರಗಳೊರ್ಧಿಯು ಹರಿ ನಿನ್ನ ಶುಭನಾಮ ರಸಾಯನ ಭವರೋಗ ಪರಿಹರ ಕಾರಣವಲ್ಲದೌಷಧ ಉಂಟೆ ಹರಿ ನಿನ್ನ ಧ್ಯಾನ ಧಾರಣ ಬಿಂಬ ದರುಶನ ಕಾರಣವಲ್ಲದನ್ಯ ಸಾಧನ ಜೀವರಿಗುಂಟೆ ಹರಿ ನೀ ವ್ಯಕ್ತನಾದರೆ ಪಾತ್ರನೆನಿಪ ನಾ ಕರುಣಿಸೊ ಕರುಣಾಬ್ಲಿ ಪ್ರಸನ್ನವೆಂಕಟ ಕೃಷ್ಣ || 1 ಮಠ್ಯತಾಳ ನಿನ್ನ ಕೇಳಿ ಕೇಳಿ ಕೆಲರನ್ಯವ ಮರೆದರು ನಿನ್ನ ಸುಚರಿತೆ ಕೇಳಿ ಧನ್ಯರು ಒರೆದರು ನಿನ್ನ ಪಾದಕಾಂತು ಮನ ವೇದಿಸಿದರು ನಿನ್ನ ಕಾಣಲೋಸುಗಾರಣ್ಯದ ಸೇರಿದರು ನಿನ್ನ ಮಹಿಮೆಯೆಂತೊ ನಿನ್ನ ಮೋಹವೆಂತೊ ನಿನ್ನ ಬಿಡಲಾರೆ ಪ್ರಸನ್ನವೆಂಕಟ ಕೃಷ್ಣ |॥ 2 |। ತ್ರಿಪುಟತಾಳ ಪ್ರಕೃ…