Haridasa Sahitya — Vyasadasa

Sri moola ramadevara mahima sulaadhi

ಶ್ರೀ ಮೂಲ ರಾಮದೇವರ ಮಹಿಮಾ ಸುಳಾದಿ

Composer: Prasanna Venkata Dasaru · Deity: Rama · Genre: Sulaadi

Kannada lyrics

ಶ್ರೀ ಮೂಲ ರಾಮದೇವರ ಮಹಿಮಾ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮ ಜೀಮೂತಶಾಮ ಶ್ರೀಮೂಲರಾಮ ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ ಪ್ರೇಮಸಾಗರ ಭಕ್ತಜನ ಮನೋಹರ ಸಾಮಜಾರ್ತಿಹರ ಸಾಮಗಾನಾದರ ನಿ - ಸ್ತ್ರೀಮ ಗುಣಗಂಭೀರ ಏಕವೀರ ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ ನೀ ಮನ್ನಿಸು ಪ್ರಸನ್ನವೆಂಕಟಾದ್ರಿಶ ರಘುರಾಮ ॥ 1 ॥ ಮಠ್ಯತಾಳ ಪಿಂತೆ ಸಮೀರಜನ ಸೇವೆಗೆ ಮೆಚ್ಚ - ತ್ಯಂತ ಪ್ರಸನ್ನನಾಗ್ಯವನ ಶುಭಕರ ಸಂತತಿಗಭಯವನಿತ್ತಪನೆಂದೀಶ ನಿಂತಿಹೆ ಪ್ರಸನ್ನವೆಂಕಟಪತಿರಾಮ ಕಂತುಜನಕ ನಿತ್ಯಾನಂದನೆ ನಿ - ನಂತವರಿಯೆ ನಿಗಮಾಗಮಕಳವೆ |॥ 2 | ತ್ರಿಪುಟತಾಳ ನಿರುತ ವೈಕುಂಠ ಮಂದಿರವಿದ್ದು ಪರಣ ಕುಟೀರವನಾಶ್ರಯಿ…