Haridasa Sahitya — Vyasadasa

Sri Krishna mahima stotra sulaadhi

ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ

Composer: Prasanna Venkata Dasaru · Deity: Krishna · Genre: Sulaadi

Kannada lyrics

ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ ರಾಗ ಆರಭಿ ಧ್ರುವತಾಳ ಬಾಲಸೂರ್ಯನಿಭಮಣ್ಯಾಂಕ ಮೌಳಿ ಹೀಲಿಯ ಪಿಂಛ ಪ್ರವಾಳ ಗುಚ್ಛ ಮಾಲ್ಯಾಲರದಂಡೆ ಝಂಕರಿಪಾಳಿ ಬಾಲರಯ್ಯನ ಮೊಗದ ಶೋಭೆ ಭೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ - ಶಾಲೇರಿ ಸಿರಿವತ್ಸ ಕೌಸ್ತುಭ ನೀಲಮಾಣಿಕ ವಜ್ರವಲಯ ವೈಜಂತಿ ವನ - ಮಾಲೆ ತುಲಸಿ ಗಂಧ ಮೌಕ್ತಿಕ ಸರಗಳ ನೀಲನದ ರತುನ ದಾಮ ಪೊನ್ನ ಚೀಲ ನೂಪುರ ಕಿರುಗೆಜ್ಜೆಯ ಗೋ - ಪಾಲ ಪ್ರಸನ್ನವೆಂಕಟ ಶಾಮಲಕಾಯ ।॥ 1 ।। ಮಠ್ಯತಾಳ ನಂದವ್ರಜದ ಗೋವರ ವೃಂದಾಂಬುಧಿಗೆ ಪೂ - ರ್ಣೇಂದು ನಂದಸೂನು ಲಾಸ್ಯವಾಡೆ ಒಂದೊಂದು ಲಯದ ಗತಿ ಹೋಂದ್ಯಮರ ದುಂದುಭಿಗಳಂ ಧಳಧಂ ಧಂದಳನ್ನೆ ಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರಬಂಧ ಹೇಳ ನಂದರಸ - ದ…