Haridasa Sahitya — Vyasadasa

Sri hariye jeevara niyamaka sulaadhi

ಶ್ರೀ ಹರಿಯೇ ಜೀವರ ನಿಯಾಮಕ ಸುಳಾದಿ

Composer: Prasanna Venkata Dasaru · Deity: Hari · Genre: Sulaadi

Kannada lyrics

ಶ್ರೀ ಹರಿಯೇ ಜೀವರ ನಿಯಾಮಕ ಸುಳಾದಿ ರಾಗ ಶ್ರೀರಂజನಿ ಝಂಪೆತಾಳ ಹರಿಯ ನಗರವು ಕಳೆವರವು ತಾತ್ವಿಕರೆಲ್ಲ ಹರಿಯ ಚಾರಕರು ಮನಸ್ತತ್ವದಲಿ ನಿಂದು ಪರಿ ಪರಿ ವ್ಯಾಪಾರಗಳ ಮಾಡಿಸುವರು ಶ್ರೀ- ಹರಿಯ ಪ್ರೇರಣೆಯೆಂದು ಹರಿ ಸೇವೆಯೆಂದು ಸಿರಿ ವೈಷ್ಣವ ಧರ್ಮ ಪ್ರೇರಕ ಪದುಮ ಸಂಭವನು ವಿರತಿ ಧರ್ಮ ಜ್ಞಾನ ಐಶ್ವರ್ಯ ಭಾರತಯ ಅರಸ ಪ್ರೇರಕ ಅಹಂಕಾರ ಪ್ರೇರಕರನಾದ ಗಿರಿಜಾ ರಮಣ ರುದ್ರದೇವ ನಿರುತ ವರ ಪಂಚರಾತ್ರಾಗಮ ಜ್ಞಾನ ಪ್ರೇರಕನು ಉರಗಾಧಿಪನು ವೇದೋಕ್ತ ಜ್ಞಾನಗಳ ಗರುಡ ಪ್ರೇರಿಪ ಪ್ರಸನ್ನವೆಂಕಟೇಶ್ವರನ ಮರಿಯಾದೆಯಿಂ ಮೀರದಿಪ್ಪರಾಗಿ ॥1 ।| ಮಠ್ಯತಾಳ ಯಜನಾದಿ ಕರ್ಮಜ್ಞಾನದ ಪ್ರೇರಕ ಇಂದ್ರ అం- ಗಜ ಹರಿ ಪ್ರೀತಿಕರ ಕಾಮ್ಯ ಕರ್ಮ ಪ್ರೇರಕನು ತ…