Haridasa Sahitya — Vyasadasa

Sri hari mahime sulaadhi

ಶ್ರೀ ಹರಿ ಮಹಿಮೆ ಸುಳಾದಿ

Composer: Prasanna Venkata Dasaru · Deity: Hari · Genre: Sulaadi

Kannada lyrics

ಶ್ರೀ ಹರಿ ಮಹಿಮೆ ಸುಳಾದಿ ರಾಗ ಮುಖಾರಿ ಧ್ರುವತಾಳ ಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವ ಮಗನ ಪಡೆದಿರುವೆ ನಾಭಿಕಮಲದಿ ದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆ ಖಗಗಮನಗಣಿತಗುಣನಿಲಯ ದೇವ ಮಗುಲೈದುಗಣೆಯಿಂ ಮೂಜಗವ ಮೋಹಿಪ ಕಿರಿಯ ಮಗನುಳ್ಳ ಸಿರಿಯು ಸಂಗಡಲೆ ಮುಕುಂದ - ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬ ಮಗಳು ಹುಟ್ಟಿದಳು ವಾಮಾಂಫ್ರಿವರಳೊಳು ಮಗುವೆನಿಸಿ ಗೋಕುಲದೆಶೋದೆನಂದನರ ಮು- ದ್ದುಗಳ ಸಲಿಸಿದೆ ಮಹಾಮಹಿಮ ಕೃಷ್ಣ ಆಗಮಕೋಟಿಗಳು ನಿನ್ನರಸಿ ಕಾಣವು ಗಡ ಬಗೆಯಲಳವಾರಿಗಹುದಯ್ಯ ಜೀಯ ವಿಗಡ ಪೋಕರನಳಿಸಿ ಆತ್ಮಜೀವರ ಬೆಳು - ವಿಗೆಯ ತೋರಿಸುವೆ ವೈಷಮ್ಯವಿದೂರ ಜಗದಾತ್ಮ ಜಗವ್ಯಾಪ್ತ ಜಗದುದರ ಜಗದ್ವರದ ಜಗದೇಕ ಮೂರುತಿ ಪ್ರಸನ್ನವೆಂಕ…