Haridasa Sahitya — Vyasadasa
Shadvarga sulaadhi
ಷಡ್ವರ್ಗ ಸುಳಾದಿ
Composer: Prasanna Venkata Dasaru · Deity: Hari · Genre: Sulaadi
Kannada lyrics
ಷಡ್ವರ್ಗ ಸುಳಾದಿ ರಾಗ ತೋಡಿ ಝಂಪತಾಳ ಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರ ನೆನವಿನಲಿ ಜನುಮಗಳ ತಂದೀವ ಕಾಮ ಕನಕಗಿರಿ ಕೈಸಾರ್ದಡಂ ಪರಸು ದೊರೆದಡಂ ಇನಿತು ತೃಪುತಿಯ್ದಿದದೆನ ಮನೋಕಾಮ ಜನಪರ ಸಿರಿಬಯಕೆ ಜಾಣೆಯರ ಸಂಗತಿಯ ಕನಸಿನೊಳಗಾದಡಂ ಬಿಡದಿಹುದು ಕಾಮ ತನಗಲ್ಲದ್ದವಣದಿಹ ಕಾಮ ಕಾಮಿನಿ ಭೂತ ಕೆನಿತಶನ ಸಾಲದಾಯಿತೈ ಪೂರ್ಣಕಾಮ ಮುನಿನಾರಿಯಳ ಕಲ್ಲಮೈಯನೆತ್ತಿದ ಪಾದ - ವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನ ಜ್ಞಾನ ಭಕುತಿ ವೈರಾಗ್ಯ ಕಾಮವನೀಯೊ ದಿನಕರ ಕುಲೋದ್ದಾಮ ಪ್ರಸನ್ನೆಂಕಟ ರಾಮ || 1 || ಮಠ್ಯತಾಳ ಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧ ಬರಿಯಹಂಕಾರದಿ ಬೆರತಘರಾಶಿಯ ನಿರಹಿಸಿ ನಿರಯವನುಣಿಸುವ ಕ್ರೋಧ ಮರ…