Haridasa Sahitya — Vyasadasa

Sarvavyapti sulaadhi

ಸರ್ವವ್ಯಾಪ್ತಿ ಸುಳಾದಿ

Composer: Prasanna Venkata Dasaru · Deity: Hari · Genre: Sulaadi

Kannada lyrics

ಸರ್ವವ್ಯಾಪ್ತಿ ಸುಳಾದಿ ರಾಗ ನಾಟ ಧ್ರುವತಾಳ ಶ್ರೀವಧುವೆ ನಿನ್ನ ಪೊಂದಿರಲೆ ದೇವ ಆವ ಕಾವುದು ಸಿರಿಯೆ ಗೋವ್ರಜದಬಲೇರ ಮನೆಯ ಪಾಲಿನ ರುಚಿ ಆವುದಧಿ ಮಿಗಿಲೆ ಆವಾಗ ಮುನಿಮನಗೇಹದಿಂದ ರಥವಾಜಿ ಬೋವತನವು ದೊಡ್ಡಿತೆ ಭಾವಿಸಲಳವಲ್ಲನಂತ ಮಹಿಮ ನಿನ್ನ ದೇವ ದಾನವರಿಗೊಲಿದೆ ಕಾವನಜನಕ ಅಗಣಿತ ಗುಣನೆ ಪ್ರಸನ್ನವೆಂಕಟೇಶ ಹರೆ |॥ 1 |॥ ಮಠ್ಯತಾಳ ಅಂಬುಜಭವ ಮೃಡ ಬಿಡೌಜರಿಗಿ – ೩ಂಬುಗೊಡುವಾನಿಮಿಷರೊಡೆಯ ನಂಬಿದರ ಕುಟುಂಬನೆ ಅಂತರ್ಬಹಿರ್ಮಯನೆ ಕಂಬುಕೊಳಲು ಸಂಭ್ರಮದೂದುವ ನಂಬಿದರ ಕುಟುಂಬನೆ ಕರು- ಣಾಂಬಕ ಪ್ರಸನ್ನೆಂಕಟ ವಿಭುವೆ |॥ 2 |॥ ತ್ರಿಪುಟತಾಳ ಜಲಜಜಾಂಡವು ರೋಮರೋಮದ ಕುಳಿಯಲಿಡಿದಿರಲಖಿಳ ಶರಣರ ಸಲಹುದರಿದೆ ತಂದೆ ಮಲಿನಯುತ ಜನಮೇಳ ನೆ…