Haridasa Sahitya — Vyasadasa

Sanga sulaadhi

ಸಂಗ ಸುಳಾದಿ

Composer: Prasanna Venkata Dasaru · Deity: Hari · Genre: Sulaadi

Kannada lyrics

ಸಂಗ ಸುಳಾದಿ ರಾಗ ಅಠಾಣ ಧ್ರುವತಾಳ ಸುಜನರಾವನ ಮನೆಯಲ್ಲುಂಡು ದಣಿದರೆ ಅಜನಜನಕನೇವೆ ತೃಪುತನಾದನು ಗಡ ಅಜನಜನಕ ತೃಪುತನಾದಡೆ ತಡಿಯದೆ ತ್ರಿಜಗಜ್ಜಿವರುಂಡಂತಾಯಿತು ನೋಡಿರೋ ಸುಜನರಿಂದುರು ವಿಷಯದ ನಿವೃತ್ತಿ ಸುಜನ ಸಂಗವೆ ಭವಾಂಬುಧಿಗೆ ಪ್ಲವ ಪ್ರಸನ್ನವೆಂಕಟ ಕೃಷ್ಣನೆ ಕರ್ಣಾಧಾರ ॥ 1 ಮಠ್ಯತಾಳ ಎಲ್ಲಿ ಹರಿಯ ಪೂಜಕರಿದ್ದ ದೇಶ ಅಲ್ಲಿ ಗಂಗಾದಿ ನದಿಗಳ ನಿವಾಸ ಅಲ್ಲಿ ಸರ್ವಸಂಪದ ಶ್ರೇಯಸಕ್ಕು ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ ಅಲ್ಲಿ ಸರ್ವಸಂಪದ ಶ್ರೇಯಸಕ್ಕು |॥ 2 ರೂಪಕತಾಳ ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ ಬೊಮ್…