Haridasa Sahitya — Vyasadasa
Harisarvottamatva sulaadhi
ಹರಿಸರ್ವೋತ್ತಮತ್ವ ಸುಳಾದಿ
Composer: Prasanna Venkata Dasaru · Deity: Hari · Genre: Sulaadi
Kannada lyrics
ಹರಿಸರ್ವೋತ್ತಮತ್ವ ಸುಳಾದಿ ರಾಗ ಹಿಂದೋಳ ಧ್ರುವತಾಳ ಹರಿಸರ್ವೋತ್ತಮ ಹರಿಪರಬ್ರಹ್ಮ ಹರಿಸಮರಾರಿಲ್ಲ ಹಿರಿಯರುಂಟೆಲ್ಲಿ ಹರಿ ಪಟ್ಟಗಟ್ಟಿದಮರರು ವಂದಿತರು ಹರಿಯನಾದರಿದಸುರರು ನಿಂದಿತರು ಹರಿಯೊಲಿದಿರುವರ್ಭಕರೆ ಕೀರ್ತಿಯುತರು। ಹರಿಯನರ್ಚಿಸದ ವೃದ್ದರೆ ಬಹಿಷ್ಕೃತರು ಹರಿಯವೇನ ನಾಮವು ಅರೂಪ ಗುಣದೂರ ಶ್ರೀ – ಹರಿ ಪ್ರಸನ್ನೆಂಕಟ ವರದ ಉದಾರ ॥ 1 ।॥ ಮಠ್ಯತಾಳ - ಅಯ್ಯನ ನಾಮವೆಂದರೆ ಅನಂತ ನಾಮವು ಸ್ವನಾಮವಿಲ್ಲ ಹೀಗಲ್ಲ ಅರೂಪವೆಂದರೆ ಪ್ರಾಕೃತರೂಪ ಸ್ವರೂಪವಿಲ್ಲ ಹೀಗಲ್ಲ ಗುಣರಹಿತೆಂಬುದು ತ್ರಿಗುಣಾತೀತಾ ಗಣಿತ ಗುಣಗಳಿಲ್ಲ ಹೀಗಲ್ಲ ನಿರ್ಗುಣ ಅರೂಪನಾಮನೆಂಬರು ಸ್ವರ್ಗಜವರದ ಪ್ರಸನ್ನೆಂಕಟೇಶಗೆ ನಾಮವೆಂಬುದು ಹಾಗಲ್ಲ ॥| 2 || ತ್ರ…