Haridasa Sahitya — Vyasadasa

Prananathana noduva banni

ಪ್ರಾಣನಾಥನ ನೋಡುವ ಬನ್ನಿ

Composer: Venkata Vitthala Dasaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಪ್ರಾಣನಾಥನ ನೋಡುವ ಬನ್ನಿ । ಹರಿದಾಸರೆಲ್ಲ ॥ ಪ ॥ ಬೇಡಿದ ಮುಕ್ತಿಯ ನೀಡುವ ನಾಡೊಳು ॥ ಅ. ಪ ॥ ನೋಡುವ ಜನರ ಕಾಡುವ ನಮ್ಮ ದೊರೆ ಇಂದಿರೆ ಅರಸನ ಚರಣದ್ವಂದ್ವವ ಹೊಂದಿ ॥ ೧ ॥ ಮಂದರಧರ ಮಧುಸೂದನ ಭಕ್ತನ ಹರಿಹರ ಕರಿವರದ ಪರಾತ್ಪರ ॥ ೨ ॥ ಪುರುಷನ ಭಕ್ತನ ಪರಿಪಾಲನಮ್ಮ ಶ್ರೀದ ಹನುಮ ಭೀಮ ಮಧ್ವಾಂತರ್ಗತ ॥ ೩ ॥ ರಾಮಕೃಷ್ಣ ವೇದವ್ಯಾಸಾರ್ಪಿತವೆಂದು ಸೃಷ್ಟಿಯೊಳಗೆ ಬಂದು ಮುಕ್ತ ಪುರನಿಂದು ದುಷ್ಟ ದೈತ್ಯರ ಕೊಂದು ವೆಂಕಟವಿಠಲನ ದಾಸನೆಂದು ॥ ೪ ॥

Transliteration

Prananathana noduva banni | hari dasarella || Bedida muktiya niduva nadolu | Noduva janara kaduva namma dore Imdire arasana carana dvamdvava homdi | || 1 || Mamdaradhara madhusudana Baktana Harihara karivarada paratpara || 2 || Purushana Baktana paripalanamma Srida hanuma bima madhvamtargata ||3|| Ramakrushna vedavyasarpitavendu Srushtiyolage bandu mukta puranindu | Dushta daityara kondu venkatavi…