Haridasa Sahitya — Vyasadasa
Poreya bekenna raghavendra
ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ
Composer: Haridasa · Deity: Raghavendra Teertharu · Genre: Dasara Pada
Kannada lyrics
ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ ಪಾವನ್ನ ಶರಣನೆ೦ದು ನಿನ್ನ ಶರಣುಹೊಕ್ಕೆನಾ ಕರುಣಿ || ಪ || ಸದಮಲಕಲಾಗ್ರಣಿ ಸುಧೀ೦ದ್ರಯತಿ ಪಾಣಿ ಪದುಮದಿ೦ದ ಜನಿಸಿದ ದಿವ್ಯಘನ ಮೌನಿ ಹೃದಯಾಬ್ಜದಲ್ಲಿ ಹರಿಯ ಪಾದ ಪದುಮಾದರದಲಿ ಬಲುಪರಿನವ ವಿಧಭಕುತಿಯಲ್ಲಿ ಪೂಜಿಸುವಾ ಸುಗುಣ ವೊದಗಿ ನಿನ್ನ ಧ್ಯಾನ ಸ್ನೇಹದ ಬಗೆಬಲ್ಲಿ || ೧ || ಜನನಿ ಜನಕರು ತಮ್ಮ ತನುಜಾನು ತಿಳಿಯದೆ ಅನುಚಿತ ಕಾರ್ಯವಾ ಅನುಸರಿಸಲು ಅವನ ಕನುಕಾರ ಬಿಟ್ಟು ಅವನ ನಡತೆ ಮನಸಿನೊಳಿಟ್ಟು ಪೋಷಿಸದಲೆ ಮುನಿದಿನ್ನು ಸಿಟ್ಟು ಮಾಡುವರೇನೂ ಅನಘ ತ್ವದ್ದಾಸನ ಘನದಯವಿಟ್ಟೂ || ೨ || ಹಲವು ಮಾತೇನು ಶ್ರೀ ನಿಲಯಾನನುಗ್ರಹ ಬಲದಿ ವ್ಯಾಪಾರವ ಅಭಿನವಜನಾರ್ಧನವಿ ಠ್ಠಲನ ಭಕ್ತ ಭಕುತಿ ಜ್ಞಾನ…
Transliteration
Poreyabekenna raghavendra guruve pavanna Sarananendu ninna saranuhokkena karuni || pa || Sadamalakalagrani sudhindrayati pani Padumadinda janisida divyagana mauni Hrudayabjadalli hariya pada Padumadaradali baluparinava Vidhabakutiyalli pujisuva suguna Vodagi ninna dhyana snehada bageballi || 1 || Janani janakaru tamma tanujanu tiliyade Anucita karyava anusarisalu avana Kanukara bittu avana nadate…