Haridasa Sahitya — Vyasadasa

Pavamana madgurave pavamana

ಪವಮಾನಾ ಮದ್ಗುರವೆ ಪವಮಾನಾ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಪವಮಾನಾ ಮದ್ಗುರವೆ ಪವಮಾನಾ ||pa|| ಪವಮಾನಾ ಗುರುವೆ ಪರಾಕು | ನಾನು | ವಿವರಿಸುವೆನು ಕೇಳು ವಾಕು || ಆಹಾ | ತವಕದಿಂದಲಿ ಸಂಭವಿಸುವ ಮತಿಯಿತ್ತು | ಭವದಿಂದ ಕಡೆಗಿತ್ತು ||a.pa|| ಆಶ್ರಿತಜನ ಕಲ್ಪವೃಕ್ಷಾ | ನಿನ್ನ | ಆಶೆಮಾಡಿದೆ ಬಲು ದೀಕ್ಷಾ | ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ | ದಾಸತ್ವ ಕೊಡು ಬಲುದೀಕ್ಷಾ || ಆಹಾ || ಏಸು ಜನ್ಮಗಳಿಂದ | ದೋಷವ ಕಳೆದು ಸಂ | ತೋಷವಾಗುವ ಕರ್ಣ | ಭೂಷಣ ಕೃಪೆ ಮಾಡೊ ||1|| ಸುಜ್ಞಾನ ಪ್ರಾಣೋತ್ತಮ ರೂಪ | ನಿನ್ನ | ನಾನು ನಂಬಿದೆನೊ ಪ್ರತಾಪ | ಸುರ | ಧೇನು ಭಕ್ತರಿಗೆ ಸಮೀಪ | ಜಗ | ತ್ರಾಣ ಕಪಿಕುಲ ದೀಪ || ಆಹಾ || ಆನಾದಿಯಲಿ ಬಂದು | ಸುಜ್ಞಾನ ನೋಡಿಸಿ | ಮಾನಸದಲಿ ಭೇದ | ವನ್ನು…

Transliteration

Pavamana guruve paraku | nanu | Vivarisuvenu kelu vaku || aha | Tavakadimdali sambavisuva matiyittu | Bavadinda kadegittu ||a.pa|| Asritajana kalpavruksha | ninna | Asemadide balu diksha | Gunarasiviraga pratyaksha | vagi | Dasatva kodu baludiksha || aha || Esu janmagalinda | Doshava kaledu san | Toshavaguva karna | Bushana krupe mado ||1|| Suj~jana pranottama rupa | ninna | Nanu nambideno pratapa…