Haridasa Sahitya — Vyasadasa
Parvati palisenna maninirenna
ಪಾರ್ವತಿ ಪಾಲಿಸೆನ್ನ ಮಾನಿನಿ
Composer: Gopala Dasaru · Deity: Gouri / Parvati Devi · Genre: Bhakti
Kannada lyrics
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।।ಪ॥ ಪಾರ್ವತಿ ಭಕ್ತರ ಸಾರಥಿ ವಂದಿತೆ ಸುರಪತಿ ಗಜಮುಖ ಮೂರುತಿ ಮಾತೆ ।।೧।। ಮನದಭಿಮಾನಿಯೇ ನೆನೆವೆನು ನಿನ್ನ ಅನುಸರಿಸೆನ್ನನು ಅಂಬುಜ ಪಾಣಿ ।।೨।। ಮಂಗಳೆ ಮೃಡನ ಅಂತರಂಗಳೇ ಹರಿಪದ ಭೃಂಗಳೆ ತೊಂಗಳೇ ಪನ್ನಗ ವೇಣಿ ।।೩।। ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ಕಾಣಿಸಿ ಕೊಡುವಂತ ಶೂಲಿಯ ರಾಣಿ ।।೪।।
Transliteration
parvati palisenna maninirenna | parvati bakutara sarathi vandipe | surapati gajamuka muruti mate | manadabimaniye nenevanu ninnanu anugrahisennanu anbuja pani | 1 | mangale mrudha nantarangale hari pada | brungale tungale pannanga veni | 2 | gunapurna venu gopala vithalana kanisi koduvanta suliya rani | 3 |