Haridasa Sahitya — Vyasadasa

Paramarahasyavidu keliri sajjanaru

ಪರಮ ರಹಸ್ಯವಿದು ಕೇಳಿರಿ ಸಜ್ಜನರು

Composer: Vijaya Dasaru · Deity: Hari · Genre: Ugabhoga

Kannada lyrics

ಪರಮ ರಹಸ್ಯವಿದು ಕೇಳಿರಿ ಸಜ್ಜನರು ಅರುಹುವೆ ಸಿರಿಪತಿಯ ವ್ಯಾಪಾರವ ಕರುಣಿಸಿ ವಾಕು ಮನೋ ಮಯನೆನಿಸಿ ಶಿರದಶ ತೋಳೆರಡು ಪದವೆರಡು ಧರಿಸುತ್ತ ಸ್ಥಿರ ದೇಹದಲ್ಲಿ ನಿಂತು ತ್ರಿವಿಧರ ಮನದಲಿಪ್ಪ ಸುರರಿಗೆ ಬಲಭಾಗ ಪಂಚಾಸ್ಯದಿ ಇವರಿ ವರ ಸ್ತ್ರೀಯರಿಗೆ ವಾಮ ಪಂಚಾಸ್ಯದಿಂದ ಪ್ರೇರಣೆ ಮಾಡುತ್ತ ಸದಾಕಾಲಾ ಶರಣವತ್ಸಲ ಸಿರಿ ವಿಜಯವಿಠ್ಠಲರೇಯ ವರವ ಕೊಡುತಿಪ್ಪ ಇವರ ಗತಿ||

Transliteration

Paramarahasyavidu keliri sajjanaru Aruhuve siripatiya vyaparava Karunisi vaku manomayanenisi Siradasa toleradu padaveradu dharisutta Sthiradehadali nintu trividhara manadalippa Surarige balabaga pancasyadi iva- Rivara striyarige vamapamcasyadinda Prerane madutta sadakala Saranavatsala sirivijayavithalareya Prantakke kodutippa ivara gati |