Haridasa Sahitya — Vyasadasa

Parama mangala muruti

ಪರಮ ಮ೦ಗಳ ಮೂರುತಿ

Composer: Vijaya Dasaru · Deity: Raghavendra Teertharu · Genre: Bhakti

Kannada lyrics

ಪರಮ ಮ೦ಗಳ ಮೂರುತಿ – ದಿವ್ಯ ಕೀರುತಿ ಧರೆಯೊಳಗಿದೆ ವಾರುತಿ || ಪ || ಕರುಣಾಪಯೋನಿಧಿ ಕರವ ಪಿಡಿದು ಎನ್ನ ಕರುಣಶುಧ್ಧನ ಮಾಡೊ ಕರೆವೆ ಮಸ್ತಕ ಬಾಗಿ || ೧ || ರಾಘವೇ೦ದ್ರರ ಪಾದ ಲಾಘವಮತಿಯಲ್ಲಿ ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ || ೨ || ನಿರುತ ಮ೦ತ್ರಾಲಯ ಪುರವಾಸ ಅಘನಾಶ ಸಿರಿ ವಿಜಯವಿಠ್ಠಲನ್ನ ಚರಣ ಭಜಿಪ ಗುರುವೆ || ೩ ||

Transliteration

Parama mangala muruti – divya kiruti Dhareyolagide varuti || pa || Karunapayonidhi karava pididu enna Karunasudhdhana mado kareve mastaka bagi || 1 || Ragavendrara pada lagavamatiyalli Slagana madida magadhariyapriya || 2 || Niruta mantralaya puravasa aganasa Siri vijayaviththalanna carana Bajipa guruve || 3 ||