Haridasa Sahitya — Vyasadasa

Parama harushavayithu vijayaraaya

ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ

Composer: Mohana Dasaru · Deity: Vijaya Dasaru · Genre: Bhakti

Kannada lyrics

ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ||pa|| ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||a.pa|| ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ | ಧೇನಿಸಿ ಅರಸಲಾಕ್ಷಣದೊಳಗವಳ ವತ್ಸತಾನು ಕೂಗಲು ಕಾಮಧೇನು ಒದಗಿದಂತೆ ||1|| ತರಣಿಯ ಕಿರಣದಿಂದ ತಪಿಸಿನೆರ ಬಾಯ ಬಿಡವುತ ಬಪ್ಪರನ | ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆ ದಿವ್ಯ ಸರಸಿಯನಿತ್ತಂತೆ ||2|| ಧನವ ಪೋಗಾಡಿ ಕೊಂಡು ನರನು ಬಲುಮನ ಕ್ಲೇಶದಿಂದಿರಲು | ಘನ ಮಹಿಮನೆ ನಮ್ಮ ಮೋಹನ ವಿಠಲ-ವನ ಕೈಯ್ಯೊಳಗ ಚಿಂತಾಮಣಿಯನುಯಿತ್ತಂತೆ ||3|| parama haruShavAyitu vijayarAyagurugaLanGriyane kaMDu…

Transliteration

paripari janumada tharatharadaGagaLutirugi nODadalEve teraLi pOdavu yindu ||a.pa|| kAnanadoLu tirugi tanna mAti-yAnu kANade chintisi | dhEnisi arasalAkShaNadoLagavaLa vatsatAnu kUgalu kAmadhEnu odagidante ||1|| taraNiya kiraNadinda tapisinera bAya biDavuta bapparana | karava piDidu surataruvinaDiyalli ku-LLirisi kuDiye divya sarasiyanittante ||2|| dhanava pOgADi konDu naranu balumana klESadindiral…