Haridasa Sahitya — Vyasadasa
Paraku madade parambarisi
ಪರಾಕು ಮಾಡದೆ ಪರಾಂಬರಿಸಿ
Composer: Purandara Dasaru · Deity: Hari · Genre: Philosophy
Kannada lyrics
ಪರಾಕು ಮಾಡದೆ ಪರಾಂಬರಿಸಿ ಎನ್ನ ಅ- ಪರಾಧಂಗಳ ಕ್ಷಮಿಸೋ||pa|| ಧರಾರಮಣ ಫಣಿಧರಾಮರಾರ್ಚಿತ ಸುರಾಧಿಪತಿ ವಿಧಿ ಹರಾದಿ ವಂದಿತ||a.pa|| ನರರೊಳಗೆ ಪಾಮರನು ನಾನಿಹ ಪರಕೆ ಸಾಧನವರಿಯೆ ಶ್ರೀ ಹರಿಯೆ ಶರಣು ಹೊಕ್ಕೆ ನಿನ್ನ ಚರಣ ಕಮಲಕೆ ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು||1|| ಜಪವನರಿಯೆನು ತಪವನರಿಯೆನು ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ ಕೃಪಾವಲೋಕನದಿ ಆ ಪಾಪಗಳನೆಲ್ಲ ಅಪಹೃತವ ಮಾಡೊ ಅಪಾರ ಮಹಿಮನೆ||2|| ಕರಿರಾಜನುದ್ಧರಿಸಿ ದ್ರೌಪದಿಯ ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ ಸಿರಿಯರಸ ನಿನ್ನ ಸರಿ ಯಾರ ಕಾಣೆ ಪುರಾರಿನುತ ಸಿರಿ ಪುರಂದರವಿಠಲ||3||
Transliteration
Paraku madade parambarisi enna a- Paradhangala kshamiso||pa|| Dhararamana panidharamararcita Suradhipati vidhi haradi vandita||a.pa|| Nararolage pamaranu naniha Parake sadhanavariye sri hariye Saranu hokke ninna carana kamalake Karunadinda ninna smarane enagittu||1|| Japavanariyenu tapavanariyenu Upavasa vratagalanariye sri hariye Krupavalokanadi A papagalanella Apahrutava mado apara mahimane||2||…