Haridasa Sahitya — Vyasadasa

Paradesi ninu svadesi nanu

ಪರದೇಶಿ ನೀನು ಸ್ವದೇಶಿ ನಾನು

Composer: Vijaya Dasaru · Deity: Hari · Genre: Bhakti

Kannada lyrics

ಪರದೇಶಿ ನೀನು ಸ್ವದೇಶಿ ನಾನು ।।ಪ॥ ಪರಮ ಭಾಗವತರ ಬಾ ಹೋಗಿ ಕೇಳೋಣ ।।ಅ.ಪ॥ ಎನಗೆ ಜನಕನು ನೀನು ನಿನಗಾವ ಜನಕನೊ ಜನನಿ ಇಂದಿರೆದೇವಿ ನಿನಗಾವಳೋ ವನಜಪೀಠನು ಭ್ರಾತ ನಿನಗಾವ ಭ್ರಾತನೋ ಇನ ಸೋಮ ಮಾತುಳರು ನಿನಗಾವ ಮಾತುಳರೊ ।।೧।। ಸುರನದೀ ಅಗ್ರಜಳು ನಿನಗೆ ಅಗ್ರಜಳಾರು ಶರನಿಧಿ ಭಾವ ನಿನಗಾರು ಭಾವ ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ।।೨।। ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ ಮರುತ ದೇವರು ಗುರು ನಿನಗಾರು ಗುರುವೊ ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ

Transliteration

Paradesi ninu svadesi nanu ||pa|| Parama bagavatara ba hogi kelona ||a.pa|| Enage janakanu ninu ninagava janakano Janani indiredevi ninagavalo Vanajapithanu brata ninagava bratano Ina soma matularu ninagava matularo ||1|| Suranadi agrajalu ninage agrajalaru Saranidhi bava ninagaru bava Smaranu kirisahabavanu ninage sahabavanaro Suraru bandhugalenage ninagaru bandhavaro ||2|| Vara ila samate ninage…