Haridasa Sahitya — Vyasadasa

Pankaja mukhiyarellaru

ಪಂಕಜ ಮುಖಿಯರೆಲ್ಲರು

Composer: Purandara Dasaru · Deity: Hari · Genre: Aarathi

Kannada lyrics

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ ಭಕ್ತರ ಸಲಹುವ ಪುರಂದರ ವಿಟ್ಠಲಗೆ ಮುತ್ತೈದೆಯರಾರತಿ ಎತ್ತಿರೆ

Transliteration

Pankaja mukiyarellaru bandu lakshmiramanagarati ettire Matsyavatarage mandaroddharage acchariyinda bumi tandavage Heccada ukkina kambadimdali banda lakshmi narasimhagarati ettire(1) Vamana rupali dana bedidavage premadi kodaliya pididavage Ramacamdranagi dasa Sirananu konda svami sri krushnagarati ettire(2) Battale nintage bauddhavatarage uttama asvaneridage Baktara salahuva purandara vithalage mu…