Haridasa Sahitya — Vyasadasa

Panduranga twatpaada paalisayya

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ

Composer: Haridasa · Deity: Vishnu · Genre: Dasara Pada

Kannada lyrics

ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||pa|| ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||a.pa|| ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ || ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ || ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ ಚೆಂದದಿ…

Transliteration

panduranga twatpaada paalisayya | karunadhi pidi kaiyya||p|| pundalika muni varada namipe ninage | nee twaritadalemage||a.p|| vanaja bhavaadi samastha sura vraata | vandita srinatha | pranathaarthiharane kaamitha phala daata | munigana sanjaata | neneva janara manadolagiha vikhyaata | bhuvanaadi naatha | ghana mahimane paalisenna maata | dayamaadi twaritha ||1|| surachira mahimane bhajakaamara dhe…