Haridasa Sahitya — Vyasadasa

Pandharapura vemba dodda nagara

ಪಂಢರಾಪುರವೆಂಬ ದೊಡ್ಡ ನಗರ

Composer: Purandara Dasaru · Deity: Vitthala · Genre: Bhakti

Kannada lyrics

ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ || ಪ || ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||

Transliteration

Pandharapuravemba dodda nagara Alli vithobanemba sahukara || pa || Vithobaniruvadu naditira Alli pandharibajane vyapara || apa || Tande nine tayi nine panduranga Namma bandhu nine balaga nine panduranga Baktara poshaka panduranga Namma muktidayaka panduranga || 1 || Vithobanige priya tulasihara Alli Bakta janara vyapara Vithobanige priya bukkiya gandha Alli chandrabaga snana balu anda || 2 || Srih…