Haridasa Sahitya — Vyasadasa

Pandarapura raajavittala

ಪಂಢರಾಪರ ರಾಜವಿಠ್ಠಲಾ

Composer: Prasanna Venkata Dasaru · Deity: Vitthala · Genre: Dasara Pada

Kannada lyrics

ಪಂಢರಾಪರ ರಾಜವಿಠ್ಠಲಾ ||ಪ|| ಪಂಡಿತಾರ್ಚಿತ ಕುಂಡಲೀಶಯನ ಪಾಂಡುರಂಗ ಹರಿಗೋಪಾಲಾ ||ಅಪ|| ಚತುರಾನನಪಿತ ಚತುರ್ಭುಜಾಂಕಿತ ಚಟುಲರೂಪ ಚತುರಾಚ್ಯುತ ಮಹಿತಾ ಸತ್ಚಿತ್ತಾಕೃತಿ ಅಚಿಂತ್ಯಾದ್ಭುತ ಚಿತ್ರಚರಿತ ಜಗದೇಕ ಜಾಗೃತ. ||೧|| ಇಟ್ಟಿಗೆ ಮೇಲಿಟ್ಟ ಪುಟ್ಟ ಪಾದವು ಸೃಷ್ಟಿಸಿತು ಪಾಪರಟ್ಟುಮಾಳ್ಪನದಿ ಕಟಿಯಲಿಟ್ಟಕರ ದುಷ್ಟಕೂಟದ ಹುಟ್ಟಡಗಿಸಿ ಜಗತ್ಸ್ರಷ್ಟಿಸಿತು ||೨|| ನೊಸಲೊಳಗಿರಿಸಿದ ಕಸ್ತೂರಿತಿಲಕ ಹಸನಾಗಿ ವೈಷ್ಣವ ಮುದ್ರೆಗಳೊಪ್ಪುವಾ ವಸನ ಶ್ವೇತ ಶಶಿ ಸೂರ್ಯಾಭರಣ ವಾಸುದೇವ ಶಿರಿ ಪ್ರಸನ್ವೆಂಕಟರನ್ನಾ ||೩||

Transliteration

panDharApara rAjaviThThalA ||pa|| panDitArcita kuMDalISayana pAnDuranga harigOpAlA ||apa|| caturAnanapita caturBujAMkita caTularUpa caturAcyuta mahitA satcittAkRuti acintyAdButa citracarita jagadEka jAgRuta. ||1|| iTTige mEliTTa puTTa pAdavu sRuShTisitu pAparaTTumALpanadi kaTiyaliTTakara duShTakUTada huTTaDagisi jagatsraShTisitu ||2|| nosaloLagirisida kastUritilaka hasanAgi vaiShNava mudregaLoppuv…