Haridasa Sahitya — Vyasadasa

Pampatheeradha linga

ಪಂಪಾತೀರದ ಲಿಂಗಾ

Composer: Vijaya Dasaru · Deity: Shiva / Rudra Devaru · Genre: Bhakti

Kannada lyrics

ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ||pa|| ನೀನೆ ಗತಿಯೆಂದು ನಿದಾನದಿಂದ ಧ್ಯಾನವ ಮಾಡಲು ದೈನ್ಯದಲಿಂದ ಮಾನಾಭಿಮಾನದೊಡಿಯನೆ ಆನಂದ||1|| ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ||2|| ಹೇಮಗಿರಿಯ ವಾಸಾ ಈಶನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ||3||

Transliteration

Pampatirada linga bava basitangasampullakshana toro bakta krupanga ||pa|| Nine gatiyendu nidanadinda Dhyanava madalu dainyadalinda Manabimanadodiyane ananda ||1|| Gajacharmambara gangadhara puravairi Bajisideno ninna baktiyali sakire Kujanarolidade uttamavada dari Nijavagi torayya dinarupakari||2|| Hemagiriya vasa isanirisa Somasekarane parvatiya vilasa Rama sri vijayaviththalane nirdosha Svamiya…