Haridasa Sahitya — Vyasadasa

Pampapuradipa sri Virupaksha

ಪಂಪಾಪುರಾಧಿಪ ಶ್ರೀ ವಿರೂಪಾಕ್ಷ

Composer: Vijaya Dasaru · Deity: Shiva / Rudra Devaru · Genre: Bhakti

Kannada lyrics

ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ||pa|| ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ ಪಾದ ಸಮೀಪದ ಸೇವಕ ||a.pa|| ಹರಿಪಾದೋದಕ ಶಿರದಲಿ ಧರಿಸಿದ ಹರಿಕಥಾಮೃತ ಮಳೆಗರೆವೆ ನೀ ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ- ರೀರ ಲೇಪನದಿಂದ ವರ ತೇಜಯುತನೆ ಮುರಹರಗೆರಗದ ನರನಿಗೆ ನರಕವು ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ ನಿರುತ ಅವನ ಪದ ಮೆರೆಯದೆ ಮನಗೊಂಡೆ ಶರಣು ಅಮರನುತ ಗುರು ಶಿರೋಮಣಿಯೆ||1|| ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ- ಶೇಷ ಸ್ಥಳದೊಳು ವಾಸವಾಗಿ ಅ- ದೋಷನಾಶನ ಸಂತೋಷದಿ ಗಿರಿಜೆಗೆ ಶ್ರೀಶನ ಮಂತ್ರೋಪದೇಶವ ಮಾಡಿದೆ ದಾಶರಥಿಯ ನಿಜದಾಸರೆನಿಸುವರ ಪೋಷಿಪೆ ಶಿವ ಪರಮೇಶ ಕೃಪಾಳೊ ||2|| ಕಂದುಗೊರಳ ಜೀಯ ಸಿ…

Transliteration

paMpApurAdhipa SrI virUpAkSha nI pAlipudemmanu ||pa|| SvEta BApure surakula dIpa sadASiva pAda samIpada sEvaka ||a.pa|| haripAdOdaka Siradali dharisida harikathAmRuta maLegareve nI karuNi sankaruShaNana caraNAbja dhULi Sa- rIra lEpanadinda vara tEjayutane muraharageragada naranige narakavu sthiravendu suravara BEri BOriDutire niruta avana pada mereyade managonDe SaraNu amaranuta guru SirOmaNiye||1…