Haridasa Sahitya — Vyasadasa

Palise ni ennanu gauri devi

ಪಾಲಿಸೆ ಶ್ರೀ ಗೌರೀ ಎನ್ನನು

Composer: Pranesha Dasaru · Deity: Vishnu · Genre: Dasara Pada

Kannada lyrics

ಪಾಲಿಸೆ ಶ್ರೀ ಗೌರೀ ಎನ್ನನು ||pa|| ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ|| a.pa|| ಶರಣೆಂದವರನು ಪೊರೆವಳು ಎಂಬುವ |ಬಿರಿದು ನಿನ್ನದು ಎಂದರಿದೆನು ತ್ವರದಿಂ|| ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಿಡಿಪ ಬಲು|| ಕಾಣೆನು ಶಾಂತಿಯ ಏನೆಂಧೇಳಲಿ |ಪ್ರಾಣೇಶ ವಿಠಲನು ತಾನೆಯೇ ಬಲ್ಲನು ||

Transliteration

palise ni ennanu gauri devi | pa | palise yennanu ninnaya palige bandenu biluve sarvada kalige karunadi | a.pa.| saranendavaranu porevalu enbuva birudu ninnadendaridenu karunadi || 1 || sannuta purushana innelli kanenu manmathanenbuva banna badipa balu || 2 || kanisu santiya enendu helali pranesa vithalanu tane ballanu taye| | 3 ||