Haridasa Sahitya — Vyasadasa
Palaya maam pavamana
ಪಾಲಯ ಮಾಂ ಪವಮಾನ
Composer: Haridasa · Deity: Mukhyaprana / Vaayu / Hanuma / Bheema · Genre: Dasara Pada
Kannada lyrics
ಪಾಲಯ ಮಾಂ ಪವಮಾನ | ಪವಮಾನ ಪಾಲಯ ಮಾಂ ಪವಮಾನ ಪಾಲಯಮಾಂ ಕರುಣಾಲಯ ಹರಿಪದ ಕೀಲಾಲಯ ಮಧುಪ | ಪವಮಾನ || ಪ್ರಾಣ-ಅಪಾನ ವ್ಯಾನ-ಉದಾನ ಸಮಾನ ಪೂರ್ಣಜ್ಞಾನ ನೀನೊಲಿದೆನ್ನ ಸದಾನುರಾಗದಲಿ ಮಾಣದೆ ಪೊರೆಯೆನ್ನ |ಪವಮಾನ ||೧|| ಹರಿಸುತ ಹರಪಿತ ಚರಾಚರಸ್ಥಿತ ಶರಣ ಜನರ ಪಾಲ ಹರಿಯಾಜ್ಞದಿ ಜೀವರಿಗೆ ತುದಿಯಲಿ ಅವರವರ ಗತಿ ಪ್ರದಾತ | ಪವಮಾನ ||೨|| ಮುದ್ದು ಅಭಿನವ ಜನಾರ್ಧನ ವಿಠಲನ ಪದ್ಮಪಾದಯುಗಳ ಶುದ್ಧ ಭಕುತಿಯಲಿ ಪೊತ್ತಿ ಸುಖಿಪ ತೆರ ಉದ್ಧರಿಸುವುದೆನ್ನ | ಪವಮಾನ ||೩||
Transliteration
Palaya mam pavamana | pavamana Palaya mam pavamana Palayamam karunalaya haripada Kilalaya madhupa | pavamana || Prana-apana vyana-udana samana purnaj~jana Ninolidenna sadanuragadali Manade poreyenna |pavamana ||1|| Harisuta harapita caracarasthita sarana janara pala Hariyaj~jadi jivarige tudiyali Avaravara gati pradata | pavamana ||2|| Muddu abinava janardhana vithalana padmapadayugala Suddha Baku…