Haridasa Sahitya — Vyasadasa
Palaharavane mado
ಫಲಹಾರವನೆ ಮಾಡೋ
Composer: Purandara Dasaru · Deity: Hari · Genre: Bhakti
Kannada lyrics
ಫಲಹಾರವನೆ ಮಾಡೋ ಪರಮಪುರುಷನೆ ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ || ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು ಇಬ್ಬದಿಯಲಿ ಇಟ್ಟ ಶೇಷಫಲಂಗಳು || ನೆನೆಗಡಲೆ ಬೇಳೆ ಲಡಿಗೆ ಮೂಗದಾಳು* ಪಾನಕ ಶುಂಠಿ ಬೆಲ್ಲ ಯಾಲಕ್ಕಿಯು ಗೊನೆಬಾಳೆಹಣ್ಣು ಘೃತವು ನೊರೆಹಾಲು ಕನಕಪಾತ್ರೆಯೊಳಿಟ್ಟು ಸಕಲಪದಾರ್ಥವ || ಧ್ಯಾನಪೂರ್ವಕದಿಂದ ಮಾನಸಪೂಜೆಯ ಪನ್ನೀರನೆ ಭಕುತವತ್ಸಲನೆ ಜಾನಕಿರಮಣಗೆ ಷೋಡಶೋಪಚಾರ ದಾನವಾಂತಕ ಸಿರಿ ಪುರಂದರವಿಠಲ ||
Transliteration
Palaharavane mado paramapurushane Lalane lakshmi saha sakalasurarodeya || Kabbu kadalipala kobbari karjura Kobbida drakshi halasu tengu Subra sakkare limbe mavu kittalegalu Ibbadiyali itta seshapalangalu || Nenegadale bele ladige mugadalu* Panaka sunthi bella yalakkiyu Gonebalehannu grutavu norehalu Kanakapatreyolittu sakalapadarthava || Dhyanapurvakadinda manasapujeya Pannirane Bakutavatsalane Ja…