Haridasa Sahitya — Vyasadasa

Padavanu kandu

ಪಾದವನು ಕ೦ಡು

Composer: Haridasa · Deity: Raghavendra Teertharu · Genre: Dasara Pada

Kannada lyrics

ಪಾದವನು ಕ೦ಡು ಪಾವನನಾದೆನೊ ವೇದಾರ್ಥ ತಿಳಿದ ಗುರುರಾಘವೇಂದ್ರರ || ಪ || ಮನೋಭಾವವನು ಕೊಡುವ ಘನಭಕುತರಿಗೆ ಇಂದು ದನುಜದಲ್ಲಣನಂಘ್ರಿ ಮನದಿ ಭಜಿಸಿ ಕನಸಿನಲಿ ಕನಕರಿಸೆ ವನಜನಾಭನಪದವ ವಿನಯದಿಂದಲಿ ತೋರಿ ಮನ ಮೋದಪಡಿಸುವರ || ೧ || ಸೀತಾರಾಮರ ಪೂಜೆ ಆತುರದಲಿ ಮಾಡಿ ನೀತ ಮಾರ್ಗದಿ ಜಾತರಹಿತನಾದ ಆತುರವ ಪರಿಹರಿಸಿ ಶಾತಕುಂಭನಂತೆ ಆತುಮನ ಮಾಡುವ ಅನಿಮಿತ್ತ ಬಂಧುವಿನ || ೨ || ಗುರುಸುಧೀಂದ್ರರ ವರಕುಮಾರರಿವರು ಪರಲೋಕ ಸುಖ ಕೊಡುವ ಪರಮ ಕರುಣಿ ಧರೆಯೊಳಗೆ ಸರಿಗಾಣೆ ಜನಾರ್ಧನ ವಿಠ್ಠಲನ್ನ ಸ್ಥಿರವಾಗಿ ಭಜಿಸುವ ಗುರುಶಿಖಾಮಣಿ ಪಾದದ್ವಯವ || ೩ ||

Transliteration

Padavanu kandu pavananadeno Vedartha tilida gururaghavendrara || pa || Manobavavanu koduva ganabakutarige indu Danujadallananangri manadi Bajisi Kanasinali kanakarise vanajanabanapadava Vinayadindali tori mana modapadisuvara || 1 || Sitaramara puje Aturadali madi Nita margadi jatarahitanada Aturava pariharisi satakumbanante Atumana maduva animitta bandhuvina || 2 || Gurusudhindrara varakumararivar…