Haridasa Sahitya — Vyasadasa

Paaliso gangadhara

ಪಾಲಿಸೋ ಗಂಗಾಧರ

Composer: Ambabai · Deity: Shiva / Rudra Devaru · Genre: Dasara Pada

Kannada lyrics

ಪಾಲಿಸೋ ಗಂಗಾಧರ ಪಾಲಿಸೋ||pa|| . ಪಾಲಿಸೊ ಗಂಗಾಧರನೆ | ಮಧ್ಯ ಫಾಲದಿ ನಯನ ಉಳ್ಳವನೆ | ಆಹ ಶ್ರೀಲೋಲನ ಗುಣಜಾಲವ ಸ್ಮರಿಸುತ್ತ ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ||a.pa|| ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು ದುರ್ಮತಿಗಳನೆ ಮೋಹಿಸಿ | ಕು ಧರ್ಮದ ಶಾಸ್ತ್ರವ ರಚಿಸಿ | ಅಂ ಧತಮ್ಮಸಿಗವರ ಕಳಿಸಿ | ಆಹ ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ ಉಮೆಯೊಡನೆ ನಿತ್ಯ ರಮಿಸುತಲಿಪ್ಪನೆ||1|| ಕಂಜನಾಭನ ಮೊಮ್ಮಗನೆ | ಖಳರ ಭಂಜಿಸುವಂಥ ಬಲಯುತನೆ | ಮನ ರಂಜನ ರೂಪಾಕೃತನೆ | ಖಳ ಗಂಜಿ ಹರಿಯಿಂದ ರಕ್ಷಿತನೆ | ಆಹ ಅಂಜಿ ದೈತ್ಯರಿಗೆ ಅಮೃತ ಮಥಿಸುವಾಗ ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ ||2|| ಕಪಿಲನದಿ ತೀರದಲ್ಲಿ | ಬಹು ತಪಸಿಗಳಿ…

Transliteration

Paliso gangadhara paliso ||pa|| Paliso gangadharane | madhya paladi nayana ullavane | Aha srilolana gunajalava smarisutta lileyimda Baktara palisutippane ||a.pa.|| Brahmana brumadhye janisi | bahu durmatigalane mohisi | Kudharmada sastrava racisi | andhatammasigavara kalisi | Aha nirmala manadalli bommanayyana Bajisi nitya ramisutalippane ||1|| Kanjanabana mommagane | kalara Banjisuvantha balayuta…