Haridasa Sahitya — Vyasadasa

Paalisennanu paampakshethravaasa

ಪಾಲಿಸೆನ್ನನು ಪಂಪಾಕ್ಷೇತ್ರವಾಸ

Composer: Haridasa · Deity: Shiva / Rudra Devaru · Genre: Dasara Pada

Kannada lyrics

ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ||pa|| ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು ||1|| ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು ||2|| ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ ||3||

Transliteration

pAlisennanu paMpAkShEtravAsa PAlalOcana SaMBO vyOmakESa ||pa|| nIla lOhita vIta | caila BUShita Basita kAlAri Siva drauNi | SUla pANi || kAla kUTava meddu koMDa mEtauShadhavanittu ||1|| vyAdharUpadi raNadi kAdu pArthage sOtu nIdayadi divyAstra karuNisideyO mEdinISage SAstra bOdhisida munivarya vEdanandana ninna pAdakke namisuvenu ||2|| kAmAri supavitra | sOmArkaSiKi nEtra SAmasundaraviThala svAmi…