Haridasa Sahitya — Vyasadasa

Paalisayya gopala raaya

ಪಾಲಿಸಯ್ಯಾ ಗೋಪಾಲರಾಯಾ ।

Composer: Haridasa · Deity: Gopala Dasaru · Genre: Dasara Pada

Kannada lyrics

ಪಾಲಿಸಯ್ಯಾ ಗೋಪಾಲರಾಯಾ । ಶೀಲ ಭಕುತಿ ಜ್ಞಾನವ ನಿತ್ಯ । ಸಲಿಸುತ ಪ್ರಸನ್ನನಾಗಿ ।। pa ।। ಓಡಿಸಿ ವಿಘ್ನವ ನೀಡು ವೈರಾಗ್ಯವ । ಬೇಡುವೆ ನಾ ಕೃಪೆ ಮಾಡಿ ಗತಿ ।। 1 ।। ಆರ್ತರಭೀಷ್ಟೆಯ ಪೂರ್ತಿಪ ದಾನಿ । ಪ್ರಾರ್ಥಿಸುವೆ ಶುಭಮೂರ್ತಿ ಸದಾ ।। 2 ।। ಶ್ಯಾಮ ಸುಂದರನೆ ಸ್ವಾಮಿಯು ನಿಜವೆಂದು । ಆ ಮೌನಿಯ ಘನ ಪ್ರೇಮಾನ್ವಿತ ।। 3 ।।

Transliteration

Palisayya gopalaraaya | Sila Bakuti j~janava nitya | Salisuta prasannanagi || pa || Odisi vignava nidu vairagyava | Beduve na krupe madi gati || 1 || Artarabishteya purtipa dani | Prarthisuve subamurti sada || 2 || Syama sundarane svamiyu nijavendu | A mauniya Gana premanvita || 3 ||