Haridasa Sahitya — Vyasadasa

Ondu namavu salade

ಒಂದೇ ನಾಮವು ಸಾಲದೆ

Composer: Purandara Dasaru · Deity: Hari · Genre: Bhakti

Kannada lyrics

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ ಒಂದೇ ನಾಮವು ಸಾಲದೆ ||ಪ|| ಒಂದೇ ನಾಮವು ಭವಬಂಧನ ಬಿಡಿಸುವುದೆಂದು ವೇದಂಗಳ ಆನಂದದಿ ಸ್ತುತಿಸುವ ||ಅ.ಪ|| ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ ಸಭೆಯೊಳು ಧರ್ಮಜ ಸತಿಯ ಸೋಲೆ ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ ||೧|| ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ ಸಂದೇಹವಿಲ್ಲದೆ ಹಲವು ಕಾಲ ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ ಕಂದ ನಾರಗನೆಂದು ಕರೆಯಲಭಯವಿತ್ತ ||೨|| ಕಾಶಿಯಪುರದೊಳಗೆ ಈಶ ಭಕುತಿಯಿಂದ ಸಾಸಿರ ನಾಮದ ರಾಮನೆಂಬ ಶ್ರೀಶನ ನಾಮದ ಉಪದೇಶ ಸತಿಗಿತ್ತ ವಾಸುದೇವ ಶ್ರೀ ಪುರಂದರ ವಿಠಲನ್ನ ||೩||

Transliteration

Onde namavu salade sri hariyemba Onde namavu salade ||pa|| Onde namavu bavabamdhana bidisuvudemdu Vedangala Anandadi stutisuva ||a.pa|| Ubayarayaru seri sammatadi lettavanadi Sabeyolu dharmaja satiya sole Nabake kaiyetti draupadi krushna ennalu Ibaraja gamanege akshaya vastravanitta ||1|| Hindobba rusi putranamdu dasiya kude Sandehavillade halavu kala Dandugadolu siluki nimdantya kaladi Kanda nara…