Haridasa Sahitya — Vyasadasa
Ondu baari smarane
ಒಂದು ಬಾರಿ ಸ್ಮರಣೆ
Composer: Vadirajaru · Deity: Sri Madhwacharyaru · Genre: Dasara Pada
Kannada lyrics
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ|| ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ|| ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ|| ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ|| ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ|| ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವಮುನಿಯ||
Transliteration
Ondu baari smarane salade ||pa.|| Anandatirthara purnapragnara sarvagnarayara madhvarayara ||a.pa.|| Hindaneka janmagalali nomdu yonigalali bandu Indiresa hariya padava hondabekembuvarige ||1|| Prakruti bandhadalli siluki sakala vishayagalali nondu Akalankacarita hariya padabakuti bekembuvarige ||2|| Arumandi vairigalanu seralisadante jaridu Dhiranagi hariya padava serabekembuvarige ||3|| Gora sam…