Haridasa Sahitya — Vyasadasa
Onde ondu berala japa
ಒಂದೇ ಒಂದು ಬೆರಳ ಜಪ
Composer: Purandara Dasaru · Deity: Hari · Genre: Ugabhoga
Kannada lyrics
ಒಂದೇ ಒಂದು ಬೆರಳ ಜಪ ಒಂದೇ ಅಯಿದು ಗೆರೆಯ ಜಪ ಒಂದೇ ಹತ್ತು ಪುತ್ರ ಜೀವಿಮಣಿಯ ಜಪ ಒಂದೇ ನೂರು ಶಂಖದ ಮಣಿಯ ಜಪ ಒಂದೇ ಸಾವಿರ ಹವಳದ ಜಪ ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ ಒಂದೇ ಲಕ್ಷ ಸುವರ್ಣಮಣಿಯ ಜಪ ಒಂದೇ ಕೋಟಿ ದರ್ಭೆಗಂಟಿನ ಜಪ ಒಂದೇ ಅನಂತ ಶ್ರೀತುಳಸಿಮಣಿಯ ಜಪವೆಂದು ಪುರಂದರವಿಠಲ ಪೇಳ್ವ ||
Transliteration
Onde ondu berala japa Onde ayidu gereya japa Onde hattu putra jivimaniya japa Onde nuru sankada maniya japa Onde savira havalada japa Onde hattu savira muttina maniya japa Onde laksha suvarnamaniya japa Onde koti darbegantina japa Onde ananta sritulasimaniya japavemdu Purandara vittalapelva ||