Haridasa Sahitya — Vyasadasa
Onde manadali bhajisu vagdeviya
ಒಂದೆ ಮನದಲಿ ಭಜಿಸು ವಾಗ್ದೇವಿಯ
Composer: Purandara Dasaru · Deity: Saraswati Devi · Genre: Bhakti
Kannada lyrics
ಒಂದೆ ಮನದಲಿ ಭಜಿಸು ವಾಗ್ದೇವಿಯ | ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳು|| ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು || ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು || ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ || ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು || ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು || ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು ||
Transliteration
Onde manadali bhajisu vagdeviya ||pa|| Indu mati koduvalu shrihariya dhyanadali ||a pa|| Hinde prahladanu kamalajana satigeragi nindu Aradhisalu harivishvamayanendu | Bandu vignava kaledu bhavashuddhiyannittu | Hondisidalaga shrihariya charanadalli ||1|| Andu dashamukananuja vandisadhe vaniyanu | Bandu tapavanu gaiye bahukalake | Andadindagamecchi varavadhika bedenalu | Nindu jihveyali nidreya bed…