Haridasa Sahitya — Vyasadasa

Onde kugalate

ಒಂದೆ ಕೂಗಳತೆ

Composer: Purandara Dasaru · Deity: Hari · Genre: Philosophy

Kannada lyrics

ಒಂದೆ ಕೂಗಳತೆ ವೈಕುಂಠಕೆ ॥ಪ॥ ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥ ಸರಸಿಯಲಿ ಆನೆ ಪೊರೆಯೆಂದು ಕರೆಯಲು ತ್ವರಿತದಿ ಬಂದು ಕಾಯ್ದಾ ನರಹರಿ ಕೃಷ್ಣಾ ಸಲಹೆಂದು ಚೀರಲು ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥ ಅಂಬರೀಷ ದ್ವಾದಶೀವ್ರತ ಮಾಡಲು ದೊಂಬಿ ಮಾಡಿದ ದುರ್ವಾಸಮುನಿ ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥ ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ ಕೃಪೆಯಿಂದ ಅಕ್ಷಯವಿತ್ತ ತಾನು ಕಪಟನಾಟಕ ಕೃಷ್ಣ ಪುರಂದರವಿಠಲನ ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥

Transliteration

Onde kugalate vaikunthake ||pa|| Sandehavillavo sadhu sajjanarige ||a.pa|| Sarasiyali Ane poreyendu kareyalu Tvaritadi bandu kayda Narahari krushna salahendu ciralu Tarala prahladage kambadindali banda ||1|| Ambarisha dvadasivrata madalu Dombi madida durvasamuni Kumbinipati krushna kayendu moreyide Bembatti chakradi munisapavanu kaleda ||2|| Drupadarayana putriyapatta kaleyene Krupeyinda akshayavi…