Haridasa Sahitya — Vyasadasa

Ondanondu divasadalli guruvyasarayaru

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು

Composer: Vijaya Dasaru · Deity: Purandara Dasaru · Genre: Bhakti

Kannada lyrics

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು ||pa|| ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ||a.pa|| ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ||1|| ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2|| ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ | ಬಿಡದೆ ದಾಸರ ದಾರಿಯ ನೋಡಿ || ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ | ಕಡೆಯದೆಶೆ ಧರಿಸಿದರು ದಾಸರಾ…

Transliteration

Ondanondu divasadalli guruvyasarayaru ||pa|| Andadinda purandaradasari | Gindu bojanakke bannirendu karedaru ||a.pa|| Pelitendu dasaru pogi tavu nirmala snana Japamantra haripujeyane madi || Dhalathalisuva vithalana divya pada Gala dhyanisi kulitaru janagalella keli||1|| Vithalana divya murtiya padi drushtiyindali nodi | Mutti mundolidu kunikunidadi || Thattane vedakke samanada padagalu | Nishthey…